Mysore BJP Office Building Construction Problem
TV9 – Mysore BJP Office Building Construction Problem
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
TV9 – Mysore BJP Office Building Construction Problem
ಮೈಸೂರು ಬಿಜೆಪಿ ಘಟಕ ಪಕ್ಷದ ಕಛೇರಿ ಕಟ್ಟಡ ನಿರ್ಮಾಣಕ್ಕೆ ಇವತ್ತು ಗುದ್ದಲಿ ಪೂಜೆ ನೆರವೇರಿಸಲು ನಿರ್ಧರಿಸಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ. ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಛೇರಿಯ ನಿವೇಶನವನ್ನ ಉದ್ಯಮಿಯೊಬ್ಬರಿಗೆ ವಿಧಾನಪರಿಷತ್ ಸ್ಥಾನದ ಆಮಿಷ ತೋರಿಸಿ ಪಡೆಯಲಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಸತ್ಯಾನಂದ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಕಛೇರಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಸ್ಥಳ ಹೋಟೆಲ್ ಉದ್ಯಮಿ ರಾಜೇಂದ್ರ ಅವರಿಗೆ ಸೇರಿದ್ದು. ಬಿಜೆಪಿ ಪಕ್ಷದವರು ರಾಜೇಂದ್ರ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡುವುದಾಗಿ ಆಮಿಷವೊಡ್ಡಿ ಆ ಜಾಗವನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಈ ಆರೋಪವನ್ನ ನಿರಾಕರಿಸಿರೋ ಉದ್ಯಮಿ ರಾಜೇಂದ್ರ, ನಾನು ಅಧಿಕೃತವಾಗಿ ಬಿಜೆಪಿ ಸೇರುತ್ತಿದ್ದೇನೆ.ಇನ್ನು ಬಿಜೆಪಿ ಕಛೇರಿ ನಿರ್ಮಾಣಗೊಳ್ಳುತ್ತಿರುವ ಈ ಜಾಗ ನನ್ನ ಸ್ವಂತದ್ದು.ಇಲ್ಲಿ ಕಟ್ಟಡವನ್ನು ನಿರ್ಮಿಸಿದ ನಂತರ ಇದನ್ನು ಬಿಜೆಪಿ ಪಕ್ಷಕ್ಕೆ ಗಿಫ್ಟ್ ಡೀಡ್ ಮಾಡಿಕೊಡುವುದಾಗಿ ತಿಳಿಸಿದ್ದಾರೆ.ಇದಕ್ಕಾಗಿ ನನಗೆ ಯಾರು ಯಾವುದೇ ಆಮಿಷವೊಡ್ಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.