Chitradurga MINI Vidhana soudha Building Construction issue

TV9 – Chitradurga MINI Vidhana soudha Building Construction issue
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
TV9 – Chitradurga MINI Vidhana soudha Building Construction issue

ಚಿತ್ರದುರ್ಗ ನಗರದಲ್ಲಿ ಮಿನಿವಿಧಾನ ಸೌಧ ಮಾದರಿಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಆಂಜನೇಯ ಮುಂದಾಗಿರುವುದು ಈಗ ವಿವಾದಕ್ಕಿಡಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ನಗರದ ಹೃದಯ ಭಾಗದಲ್ಲಿರುವ ಲೋಕೋಪಯೋಗಿ ಕಚೇರಿ, ಶಿಕ್ಷಣ ಇಲಾಖೆ ಕಚೇರಿ, ಪ್ರವಾಸಿ ಮಂದಿರ, ಎಸ್ಪಿ ನಿವಾಸ, ಜಿಲ್ಲಾ ಸರ್ಜನ್ ನಿವಾಸ, ಸರ್ವೇ ಆಫೀಸ್ ಸೇರಿದಂತೆ ವಿವಿಧ 14 ಸರ್ಕಾರಿ ಕಚೇರಿಗಳ ಅಧಿಕಾರಿಗಳಿಗೆ ಕಟ್ಟಡ ಖಾಲಿ ಮಾಡಬೇಕು. ಆ ಮೂಲಕ ಹಳೇ ಕಟ್ಟಡಗಳನ್ನು ನೆಲಸಮಗೊಳಿಸಲು ಅನುವು ಮಾಡಿಕೊಡಬೇಕೆಂದು ಪತ್ರ ಬರೆದಿದ್ದಾರೆ. ಆದ್ರೆ ಇದಕ್ಕೆ ದುರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ದೆ 14ಕಚೇರಿಗಳ ಪೈಕಿ ಕೆಲವು ಕಟ್ಟಡಗಳು ಮೂರ್ನಾಲ್ಕು ವರ್ಷಗಳ ಹಿಂದಷ್ಟೇ ನಿರ್ಮಾಣ ಮಾಡಲಾಗಿದೆ. ಅವೆಲ್ಲವುಗಳನ್ನು ಹೊಡೆದು ಹಾಕುವುದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಲಿದೆ. ಜೊತೆಗೆ ನಗರದ ಹೊರವಲಯದಲ್ಲಿ ನೂತನ ಕಟ್ಟಡ ನಿರ್ಮಿಸುವುದರಿಂದ ನಗರವೂ ಬೆಳೆದಂತಾಗುತ್ತದಲ್ಲದೆ ಉದ್ಯೋಗವಕಾಶವೂ ಹೆಚ್ಚುತ್ತದೆ. ಹೀಗಾಗಿ, ನಗರದ ಹೊರವಲಯದಲ್ಲೇ ನೂತನ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವ್ರು ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಹೆಚ್. ಆಂಜನೇಯ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಸರ್ವೇ ನಡೆಸಿದ ಬಳಿಕವಷ್ಟೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಹೇಳಿದ್ದಾರೆ.

Thanks! You've already liked this